ನನ್ನ ಮನಸ್ಸಿಗೆ ಬಂದ ಅನೇಕ ವಿಷಯಗಳನ್ನು ಕಥೆಗಳಾಗಿ ಪರಿವರ್ತಿಸಿದ್ದೇನಾದರೂ, ಈ ವರೆಗೆ ಅವು ಯಾವವೂ ಕಥೆಯಾಗಿ ಯಾರೆದುರಿಗೂ ಬರಲಿಲ್ಲ.
ಅನಿವಾರ್ಯವಾಗಿ, ಜೀವನೋಪಾಯಕ್ಕಾಗಿ ಪಟ್ಟಣಕ್ಕೆ ತೆರಳಿದ ಮಕ್ಕಳ ತಂದೆ - ತಾಯಂದಿರ ಬವಣೆಯ ಬದುಕಿನ ಬಗ್ಗೆ, ಅಥವಾ ಪಟ್ಟಣಕ್ಕೆ ಹೋದ ಮಕ್ಕಳ ಬೆನ್ನಿಗೆ ಬಿದ್ದು, ತಾವೂ ಪಟ್ಟಣ ಸೇರಿ, ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಅಂತರ ಪಿಶಾಚಿಯಾದವರ ಬಗ್ಗೆ ಬರೆಯುವ ವಿಚಾರ ಮಾಡುತ್ತೇನೆ.ಆದರೆ ಮರುಕ್ಷಣ ಅದು ನಮ್ಮಲ್ಲೇ ಯಾರಾದರೊಬ್ಬರ ಕಥೆಯಾಗಿ,ಅವರ ಮನ ನೋಯಬಹುದೆಂದು ಕೈಬಿದುತ್ತೇನೆ.ಆದರೆ ಸರಿಯಾಗಿ ಒಮ್ಮೆ ಯೋಚಿಸಿದರೆ, ನಾವು ಬರೆಯುವ ಕಥೆ ಹೇಗಿರಬೇಕು ? ಅದು ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವಂತಿರಬೇಕು ತಾನೇ? ಹಾಗಾದಲ್ಲಿ ನಾವು ಏನನ್ನೇ ಬರೆದರೂ ಅದು ಒಂದಲ್ಲಾ ಒಂದು ರೀತಿಯಲ್ಲಿ ಯಾರನ್ನಾದರೂ ತಟ್ಟದೆ ಇರದು.ಆದರೂ ಯಾಕೋ ಬರೆಯುವ ಧೈರ್ಯ ಬರದು .ಆ ಧೈರ್ಯಕ್ಕಾಗಿ ಕಾಯುತ್ತಿದ್ದೇನೆ .
ಹೀಗೆ ಎಷ್ಟೋ ವಿಷಯಗಳು ಮನದ ಮುಂದೆ ಹಾಯ್ದು ಮರೆಯಾಗುತ್ತಿರುತ್ತವೆ.ಎಲ್ಲವು ಕತೆಯಾಗದ ಕಥೆಯಾಗಿ ಉಳಿದುಬಿಡುತ್ತವೆ.

3 comments:
ಕಥೆ ಬರೆಯೋದಕ್ಕೆ ಇಷ್ಟೆಲ್ಲಾ ಪೀಠಿಕೆ ಯಾಕೆ ?
ಪೀಠಿಕೆ ಆದರೆ ಏನಂತೆ?? ಬರಹ ಚೆನ್ನಾಗಿದೆ.... ಅದೂ ಅಲ್ಲದೆ ಪೀಠಿಕೆ ಇದ್ದರೆ ತಾನೇ ಬರಹಕ್ಕೆ ಒಂದು ಅರ್ಥ ಸಿಗೋದು ??
Post a Comment