Tuesday, 21 July 2015

ಮಕ್ಕಳು ಹೀಗೇಕೆ  ನಮ್ಮನ್ನು ಇಷ್ಟು ಪ್ರೀತಿಸುತ್ತಾರೆ ?

ಸಾಮಾನ್ಯವಾಗಿ ಎಲ್ಲರೂ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದನ್ನೇ ಪದೇ ಪದೇ ಹೇಳುತ್ತಿರುತ್ತಾರೆ . ಆದರೆ ಹೀಗೇ ಒಂದು ಕ್ಷಣ ಯೋಚಿಸಿದರೆ .... ನಾವು ಹೆತ್ತವರು ಮಕ್ಕಳಿಗಾಗಿ ಏನು ಮಾಡಿರುತ್ತೇವೆ?
ಒಂದು ಗಂಡ ಹೆಂಡತಿಗೆ ಮಕ್ಕಳನ್ನು ಹೊಂದುವುದೇ ಒಂದು ಸಂಭ್ರಮದ ವಿಚಾರ . ಆಮೇಲೆ ಮಕ್ಕಳ ಆಟ ಪಾಟ ನೋಡಿ ನಲಿಯುವುದು ಸಾರ್ಥಕತೆಯ ಪರಮಾನಂದ ಮುಂದೆ ವಿದ್ಯಾಭ್ಯಾಸದ ಅವಧಿಯಲ್ಲೂ ಅವರ ನೋವು ನಲಿವಿನ ಅನುಭವದೊಂದಿಗೆ ನಾವೂ ಅವರಂತೆಯೇ ಆಗಿ ನಮಗೆ ಜೀವನ ಸರಿದಿದ್ದೇ ಗೊತ್ತಾಗುವುದಿಲ್ಲ. ಹೀಗೆ ಮಕ್ಕಳು ನಮ್ಮ ಜೀವನವನ್ನು ಸಂತೂಷಮಯವಾಗಿಸಲು ದೇವರು ನಮಗೆ ಕೊಟ್ಟ ವರ. ಇಂತಿರುವಾಗ ಮಕ್ಕಳು ತಂದೆ ತಾಯಿಯರ ಋಣ ತೀರಿಸುವ ಮಾತೆಲ್ಲಿಯದು?

ಪ್ರತಿಯೊಬ್ಬರೂ ಅವರವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಅದರಿಂತ ಬೇರೆ ಏನು ಬೇಕು?

ಆದರೂ ಮಕ್ಕಳು ನಮಗೆ ನೀಡುವ ಮುದವನ್ನು ಹಿರಿಯರಾದ ನಾವು ಅವರಿಗೆ ನೀಡಲಾರೆವು ಎಂಬುದೀ ನನ್ನ ಅನಿಸಿಕೆ. ಈ ಜನ್ಮದಲ್ಲಿ ನಾವಿಂದು ಮುಸ್ಸಂಜೆಯ ಹಾದಿಯಲ್ಲಿದ್ದೇವೆ. ಇನ್ನು ನಾವು ಅವರಿಂದ ಸೇವೆ ಮಾಡಿಸಿಕೊಳ್ಳಬಹುದೇ ವಿನಃ ನಮ್ಮಿಂದ ಹೆಚ್ಚೇನೂ ಮಾ ಡಲಾಗದು.

ಹಾಗಾಗಿ ಮುಂದಿನ ಜನ್ಮದಲ್ಲಿ ಅವರ ಮಕ್ಕಳಾಗಿ ಹುಟ್ಟಿ ಅವರ ಸೇವೆ ಮಾಡಿ ಖುಶಿ ಪಡಬಹುದೇನೋ

ಹೆತ್ತವರನ್ನು ಪ್ರೀತಿಸುವ ಮಕ್ಕಳೇ ನಿಮಗಿದೋ ಅಮ್ಮನ ಅಕ್ಕರೆಯ ಶುಭ ಹಾರೈಕೆಗಳು 

1 comment:

Anonymous said...

really touching.... Wonderful writing....
ನಿಮ್ಮ ಬರಹದಿಂದಲೇ ನೀವು ಎಷ್ಟು ಒಳ್ಳೆಯ ತಾಯಿ ಎಂದು ತಿಳಿಯುತ್ತೆ... ನಿಮ್ಮ ಮಕ್ಕಳು ತುಂಬಾ Lucky